KL Rahul Run Out : ಬಾಂಗ್ಲಾದೇಶ ವಿರುದ್ಧದ ಟಿ 20 ವಿಶ್ವಕಪ್ 2022 ಪಂದ್ಯದಲ್ಲಿ, ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ಅವರು ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ಲಿಟನ್ ದಾಸ್ ಅವರನ್ನು ಫೀಲ್ಡಿಂಗ್ ಸಮಯದಲ್ಲಿ ಬುಲೆಟ್ ಥ್ರೋನಿಂದ ರನ್ ಔಟ್ ಮಾಡಿದ್ದಾರೆ, ಈಗ ಔಟ್ ಮಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಯಾಗುತ್ತಿದೆ.


COMMERCIAL BREAK
SCROLL TO CONTINUE READING

ರಾಹುಲ್ ಬುಲೆಟ್ ಥ್ರೋನಿಂದ ಬಾಂಗ್ಲಾ ಬ್ಯಾಟ್ಸ್‌ಮನ್‌ ಔಟ್


ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿ ಬಾಂಗ್ಲಾದೇಶಕ್ಕೆ 185 ರನ್ ಟಾರ್ಗೆಟ್ ನೀಡಿತ್ತು. ಇದಕ್ಕೆ ಉತ್ತರವಾಗಿ ಬಾಂಗ್ಲಾದೇಶದ ಆರಂಭಿಕ ಆಟಗಾರ ಲಿಟನ್ ದಾಸ್ ತಮ್ಮ ವೇಗದ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾದ ಬೌಲರ್‌ಗಳ ಬೆವರಿಳಿಸಿದರು, ಆದರೆ 8ನೇ ಓವರ್‌ನ ಎರಡನೇ ಎಸೆತದಲ್ಲಿ ಕೆಎಲ್ ರಾಹುಲ್ ತಮ್ಮ ರಾಕೆಟ್ ಥ್ರೋ ಮೂಲಕ ಬಾಂಗ್ಲಾದೇಶದ ಆರಂಭಿಕ ಆಟಗಾರ ಲಿಟನ್ ದಾಸ್ ಅವರನ್ನು ರನೌಟ್ ಮಾಡಿದರು.


ಇದನ್ನೂ ಓದಿ : ICC Mens T20 World Cup 2022 : ಬಾಂಗ್ಲಾ ವಿರುದ್ಧ ಭಾರತಕ್ಕೆ 5 ರನ್ ಗಳ ರೋಚಕ ಗೆಲುವು


ಕೆಎಲ್ ರಾಹುಲ್ ಬಾಂಗ್ಲಾದೇಶದ ಆರಂಭಿಕ ಆಟಗಾರ ಲಿಟನ್ ದಾಸ್ ಅವರನ್ನು ತಮ್ಮ ಒಂದು ಕೈಯಿಂದ ಬುಲೆಟ್ ಥ್ರೋ ಮೂಲಕ ರನ್ ಔಟ್ ಮಾಡಿದರು ಮತ್ತು 27 ಎಸೆತಗಳಲ್ಲಿ 60 ರನ್ ಗಳಿಸಿ ಅವರ ಇನ್ನಿಂಗ್ಸ್ ಅನ್ನು ಕೊನೆಗೊಳಿಸಿದರು. ಬಾಂಗ್ಲಾದೇಶದ ಆರಂಭಿಕ ಆಟಗಾರ ಲಿಟನ್ ದಾಸ್ ಅವರ ಆ ರನೌಟ್ ಬಹಳ ನಿರ್ಣಾಯಕ ಸಮಯದಲ್ಲಿ ಬಂದಿತು ಎಂದು ನಾವು ನಿಮಗೆ ಹೇಳೋಣ, ಏಕೆಂದರೆ ಲಿಟನ್ ದಾಸ್ ಕ್ರೀಸ್‌ನಲ್ಲಿ ಉಳಿದಿದ್ದರೆ, ಅವರು ಬಾಂಗ್ಲಾದೇಶಕ್ಕೆ ಜಯವನ್ನು ನೀಡುತ್ತಿದ್ದರು. ಈ ಎಸೆತದಿಂದ ಕೆಎಲ್ ರಾಹುಲ್ ರನ್ ಔಟ್ ಆದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.


ಇದನ್ನೂ ಓದಿ : Kohli Record : ಟಿ20 ವಿಶ್ವಕಪ್‌ನಲ್ಲಿ ಭರ್ಜರಿ ದಾಖಲೆ ಬರೆದ ಕಿಂಗ್ ಕೊಹ್ಲಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.